ಹಾಗೆ ಸುಮ್ಮನೆ: #05

Posted on

ಬಟ್ಟೆಯಂಗಡಿಯ ಒಳಗೆ
ಗುಜ ಗುಜ ಗದ್ದಲು…!
ಹೊರಗೆ ನೋಡಿದರೆ,
ಮಕ್ಕಳ ಗಲಾಟೆ ಸದ್ದು…!
ಪಕ್ಕದಲ್ಲೇ ಅಸಹಾಯಕ
ಗಂಡಂದಿರ ಸಾಲು ಸಾಲು..!

Advertisements

ಬಿಂಬ: #09

Image Posted on

nbd-15

ಕಿರಣ: #16

Posted on

ಎದೆಯ ಕದವನು ತಟ್ಟಿದವಳು

ಹೊಸ್ತಿಲನು ದಾಟಲೊಲ್ಲಳು..

ಸ್ನೇಹದ ಸುಧೆ ಹರಿಸಿದವಳು

ಪ್ರೀತಿಯ ಕೆನೆಯಾಗಲೊಲ್ಲಳು..

ಮನದ ಮಹಾರಾಣಿಯಾದವಳು

ಪ್ರೇಮ ದೇವತೆಯಾಗಲೊಲ್ಲಳು..

 

ಓ ತಂಗಾಳಿಯೇ, ಅವಳಿಲ್ಲದೆ

ನೀನು ಕೂಡಾ ಬಿಸಿಯಾಗಿರುವೆ..

ಹೋಗು, ಹೋಗೆನ್ನ ಚೆಲುವೆಯ ಬಳಿ.!

ತಿಳಿ ಹೇಳು, ನೀನಿಲ್ಲದ ಗುಡಿಯು

ಮೀನಿಲ್ಲದ ನೀರೆಂದು, ಬೇರಿಲ್ಲದ ಗಿಡವೆಂದು..

ಕರೆ ತಾ, ಈ ಬಾಳ ಪಯಣದಲಿ

ಜೊತೆಯಾಗಲೆಂದು, ಒಂದಾಗಲೆಂದು..nir.3

ಕಿರಣ: #17 ಅವಳ……

Posted on Updated on

ಅವಳ,nir.2
ಬಳಿ ಏನೇನಿಲ್ಲಾ
ಹೇಳಲು..
ಕರಗದ ಕಥೆಗಳು
ಏನೆಲ್ಲಾ ಕೇಳಲು..

ಅವಳ,
ಮುಖವದು ತೆರೆದ
ಮಂಟಪ..
ಮನವದು ಹಿಡಿಯದ
ಮಾರುತ..

ಅವಳ,
ಕಣ್ಣಲ್ಲಿರುವ ಮೌನವೆ
ಮಾತು..
ಮೌನದಲ್ಲಿನ ಭಾವವೆ
ಹಾಡು..

ಅವಳ,
ಎದೆಯಂಗಳ ಪ್ರೇಮದ
ರಂಗೋಲಿ..
ಬಣ್ಣಗಳೋ ಮಾಸಿದ
ಬಿಸಿ ಉಸಿರು..

ಅವಳ,
ಮುಂಗುರುಳ ತುದಿಯಲಿ
ಕಂಡ ಕಾಂತಿ..
ಮುಂಬರದೆ ತಡೆದಿದೆ
ಪೊರೆಯ ಭ್ರಾಂತಿ..

ಅವಳ,
ತನುವದು ನೊಂದ
ಆಲಾಪ..
ಬಯಸಿದೆ ಹುಣ್ಣಿಮೆಯ
ಸಲ್ಲಾಪ..

ಅವಳ,
ನೋಟಗಳ ಸಾಲು
ದೀಪವಲ್ಲಿ..
ಜೀವಬೇಕಿದೆ ಆರಿದ
ಬತ್ತಿಗಿಲ್ಲಿ..

ಅವಳ,
ನಿರರ್ಗಳ ಲಹರಿಯದು
ತೊದಲುತಿದೆ..
ಬಿಕ್ಕಳಿಕೆಗೆ ಗತಿ ನೀರಿನ
ಬಟ್ಟಲು..

ಅವಳ,
ಪ್ರಯಾಣವು ಸಾಗಲಿ
ನೀರಿನಂತೆ..
ಮಂಜುಳ ಕಲರವ
ಇಂಪಾಗಲಿ..

ಅವಳ,
ನಾಳೆಗಳು ಕಾದಿವೆ ಒಲವ
ಕಾರಂಜಿಗೆ..
ಬದುಕ ಉಲ್ಲಾಸದ ಹೂ
​ಮಳೆಗಾಗಿ…

ಕಿರಣ: #15

Posted on Updated on

ಮೃದು ಮಂಜಿನ ಹನಿಗಳಿಗೆ
ತಬ್ಬಿ ಮುತ್ತಿಟ್ಟ ಹಾಗೆ..
ತಿಳಿ ಬಿಳಿಯ ಮೋಡಗಳಿಗೆ
ಬಾಚಿ ಅಪ್ಪಿಕೊಂಡ ಹಾಗೆ..
ಆಗಸದಲ್ಲಿ ರೆಕ್ಕೆ ಬಿಚ್ಚಿನಿಂತ
ಅಚಲ ಗರುಡನ ಹಾಗೆ..
ಬೆಟ್ಟದಿಂದ ಸಾಗರದೊಳಗೆ ಜಾರಿದ
ಮುಸ್ಸಂಜೆ ನೇಸರನ ಹಾಗೆ..

ಹಾರಿತೋ ಮನ..
ತೇಲಿತೋ ಮನ..
ಕಂಪಿಸಿತೋ ಮನ..
ಮುಳಗಿತೋ ಮನ..
ಮಡಿಕೇರಿ ಮಡಿಲಲಿ…!!